ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಯನ್ನು ಉತ್ಕೃಷ್ಟ ಗೊಳಿಸುವಲ್ಲಿ ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ

೧) ಆಯಾ ತರಗತಿಗಳ ಪಠ್ಯಪುಸ್ತಕಗಳನ್ನು ಪ್ರತಿನಿತ್ಯ ಅಭ್ಯಾಸಮಾಡಲು ತಿಳಿಸುವುದು
೨)ಗೂಗಲ್ ನಲ್ಲಿರುವ ಗಾದೆ ಪ್ರಬಂಧ ಮುಂತಾದ ಪಾಠಕ್ಕೆ ಸಂಬಂಧಿಸಿದ ವಿಷಯಗಳನ್ನು ಆಲಿಸಲು ತಿಳಿಸುವುದು ಮತ್ತು ಬರೆಯಲು ಹೇಳುವುದು
೩) ಯೂಟ್ಯೂಬ್ ನಲ್ಲಿ ಬರುವ ಪಾಠ ಪದ್ಯಕ್ಕೆ ಸಂಬಂಧಿಸಿದ ವೀಡಿಯೋ ನೋಡಲು ಆಡಿಯೋ ನೋಡಲು ತಿಳಿಸುವುದು
೪) ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ತರಗತಿಗಳನ್ನು ವೀಕ್ಷಿಸುವುದು ಮತ್ತು ಗೃಹ ಕಾರ್ಯಗಳನ್ನು ನಿರ್ವಹಿಸಲು ಸೂಚಿಸುವುದು
೫) ಶಾಲಾ ಮಕ್ಕಳ ವ್ಯಾಟ್ಸಪ್ ಗ್ರೂಪಿನಲ್ಲಿ ಹಾಕುವ ಆಡಿಯೋ ವೀಡಿಯೊಗಳನ್ನು ವೀಕ್ಷಿಸಿ ನೋಟ್ಸ್ ತಯಾರಿಸುವುದು
೬) ಕಂಠಪಾಠ ಪದ್ಯಗಳನ್ನು ಬರೆದು  ಕರಗತ ಮಾಡಿಕೊಳ್ಳಲು ಸೂಚಿಸುವುದು
೭) ವ್ಯಾಕರಣಾಂಶಕ್ಕೆ ಸಂಬಂಧಪಟ್ಟಂತೆ ಷಟ್ಪದಿ ಕಂದ ಪದ್ಯ ವೃತ್ತಗಳನ್ನು ಗುರುತಿಸಿ ಪ್ರಸ್ತಾರ ಹಾಕಲು ಪ್ರಯತ್ನಿಸುವುದು
೮) ವೇಳಾಪಟ್ಟಿ ರಚಿಸಿಕೊಂಡು ಪ್ರತಿ ವಿಷಯಗಳನ್ನು ಅಭ್ಯಾಸ ಮಾಡಲು ಪ್ರೇರೇಪಿಸುವುದು
೯) ಪ್ರಬಂಧ ಪತ್ರ ಲೇಖನ ಬರೆಯಲು ಹಾಗೂ ಕರಗತ ಮಾಡಿಕೊಳ್ಳಲು ತಿಳಿಸುವುದು
೧೦) ಪದ್ಯದ ಪಾಠದ ಸಾರಾಂಶ ಗಳನ್ನು ಯೂಟ್ಯೂಬ್ ದೀಕ್ಷಾ ಯಾಪ್ ಕನ್ನಡ ದೀವಿಗೆ ಮುಂತಾದ ನ್ನು ನೋಡಿಕೊಂಡು ನೋಟ್ಸ್ ತಯಾರಿಸಲು ಸೂಚಿಸುವುದು ಹೀಗೆ ಸದಾ ಅಭ್ಯಾಸ ಮಾಡಲು ಪ್ರೇರಣೆಯನ್ನು ನೀಡುವುದು
https://drive.google.com/file/d/1bZSqBlXDi2QVBPaa_Yjt088HsRiqL9K-/view?usp=drivesdkassignment 01.

Comments