ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವ ಕುರಿತು ಲೇಖನ
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವೃತ್ತಿಯಲ್ಲಿ ನಿಪುಣ ನಾಗುವುದು ವೃತ್ತಿ ನೈಪುಣ್ಯತೆ ವ್ಯಕ್ತಿ ವೃತ್ತಿ ಕೌಶಲ ಹಾಗೂ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡಾಗ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಶಿಕ್ಷಕರು ತಾವು ಮಾಡುವ ಅಥವಾ ಬೋಧಿಸುವ ವಿಷಯಗಳಲ್ಲಿ ಪುನರ್ ಆಗಬೇಕು ಎನ್ನುವುದು ಅಪೇಕ್ಷಣೀಯವಾದುದು ಆದ್ದರಿಂದ ತಮ್ಮ ಬೋಧನಾ ವಿಷಯಗಳಲ್ಲಿ ನೈಪುಣ್ಯತೆ ಪಡೆಯಲು ಹಲವಾರು ಕಾರ್ಯವಿಧಾನಗಳನ್ನು ಅನುಸರಿಸಬೇಕಾಗುತ್ತದೆ
ದೀಪವು ತಾನು ಉರಿದು ಬೆಳಕು ನೀಡುವಂತೆ ಶಿಕ್ಷಕರು ತಾವು ಜ್ಞಾನದ ದೀಪವಾಗಿ ವಿದ್ಯಾರ್ಥಿಗಳಿಗೆ
ಬೆಳಕನ್ನು ನೀಡಬೇಕು
ಶಿಕ್ಷಕರಾದವರು ನಿರಂತರವಾಗಿ ಅಧ್ಯಯನಶೀಲರಾಗಬೇಕು ಕಾಲಕ್ಕನುಗುಣವಾಗಿ ಬೋಧನಾ ಕೌಶಲ ವೃದ್ಧಿಸಿಕೊಂಡು ವೃತ್ತಿ ನೈಪುಣ್ಯತೆ
ಬೆಳೆಸಿಕೊಳ್ಳಬೇಕು
ಇಲಾಖೆ ನೀಡುವ ತರಬೇತಿಗಳಲ್ಲಿ ಭಾಗಿಯಾಗಿ ಜ್ಞಾನ ವೃದ್ಧಿಸಿಕೊಳ್ಳಬೇಕು ಆಕರ ಗ್ರಂಥಗಳ ಅಧ್ಯಯನ ಸಹೋದ್ಯೋಗಿಗಳ ಜೊತೆ ಸಂಭಾಷಣೆಗಳಿಂದ ಜ್ಞಾನ ಹೆಚ್ಚಿಸಿಕೊಳ್ಳಬೇಕು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಗಮನದಲ್ಲಿಟ್ಟುಕೊಂಡು ಅವರ ಆಸಕ್ತಿಗೆ ತಕ್ಕಂತೆ ಕಥೆಗಳ ಮೂಲಕ ಹಾಸ್ಯಗಳ ಮೂಲಕ ಆಸಕ್ತಿದಾಯಕವಾಗಿ ಪಾಠವನ್ನು ಬೋಧಿಸಬೇಕು
ಇಂದಿನ ಆಧುನಿಕ ಯುಗದಲ್ಲಿ ಅತ್ಯಂತ ಒತ್ತಡದಲ್ಲಿ ಬದುಕಬೇಕಾಗಿದೆ ನಮ್ಮ ಪರಿಸರದಲ್ಲಿ ವೃತ್ತಿಯಲ್ಲಿ ಒತ್ತಡವನ್ನು ನಿಭಾಯಿಸಿಕೊಂಡು ನೈಪುಣ್ಯತೆಯನ್ನು ಸಾಧಿಸಬೇಕು ಅದಕ್ಕಾಗಿ ನಾವು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ನಮ್ಮಲ್ಲಿ ಉತ್ತಮ ಚಿಂತನೆಗಳು ಬೆಳೆಯುವುದರ ಜೊತೆಗೆ ನಾಯಕತ್ವ ಗುಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಶಿಕ್ಷಕರ ಮಾನಸಿಕ ಸ್ವಾಸ್ಥ್ಯ ದೈಹಿಕ ಸ್ವಾಸ್ಥ್ಯ ಬೆಳೆಸಿಕೊಳ್ಳಬೇಕು
*ಯೂಟ್ಯೂಬ್ ವೀಕ್ಷಣೆ
*ದೂರದರ್ಶನ ವೀಕ್ಷಣೆ
*ಆಕರ ಗ್ರಂಥಗಳನ್ನು ಓದುವುದು
*ಬೋಧನಾ ತಂತ್ರಗಳ ಸುಧಾರಣೆ*
*ಸಾಧಕರೊಂದಿಗೆ ಸಂವಾದ
*ಮಕ್ಕಳೊಂದಿಗೆ ಸಂವಾದ ನಿರಂತರ ಸಂಪರ್ಕ
ಎಲ್ಲ ಕಾರ್ಯಕ್ರಮಗಳ ಮೂಲಕ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದು
ಬೆಳೆಸಿಕೊಳ್ಳಬೇಕು
Comments
Post a Comment